Monday, June 30, 2008

ಮರಳಿ ಬಂದ ಜೋಗದ ಗತ ವೈಭವ !!!



Life's a great leveler, opines my friend Yogi

ಮಲೆನಾಡಿಗೆ
ಮಧು ಮಗಳಿಗೆ
ಚುರುಕು ಮುಟಿತೇ ನಿನ್ನಿಂದ
ಮುಂಗಾರು ಮಳೆಯೇ...

ಜೋಗದ ಸವಿಯಲಿ
ನೆನೆ-ನೆನೆದು ಮಿಂದೆದ್ದ
ಕಂಗಳೇ ಧನ್ಯ-ಪೂರ್ಣ
ಜೀವನವದೇ ಸಂಪೂರ್ಣ

ಜೋಗದ ಸಿರಿ ಬೆಳಕಿನಲ್ಲಿ
ಗತ ವೈಭವವ ಮರಳಿ ತಂದ
ನಿನಗಿದೋ ಕೋಟಿ ವಂದನೆ
ಮುಂಗಾರು ಮಳೆಯೇ...

ಮೈ-ಮನ ಮರೆತು
ಎವೆಯಿಕ್ಕದೇ ನೋಡು ನೀ ದಿನಂಪ್ರತಿ
ಚಿರಾಯುವಾಗಲೀ..ನೂರ್ಕಾಲ ಬಾಳಲೀ ಅಳಿವವರೆಗೆ ಜೀವ ಸಂತತಿ
ಮೈದುಂಬಿದ ಜೋಗ
ಹ್ರುದಯ ಬಡಿತದ ಆ ವೇಗ !!!

3 comments:

yogi said...

mungaru male varnisalu padhagale saaladhu.. tumba chennagidhe

ತೇಜಸ್ವಿನಿ ಹೆಗಡೆ- said...

ಬೆಟ್ಟಗಳ ಹಸಿರು ಸೀರೆ ಸೆರಗಿನ ಬಣ್ಣವೇ ಈ ಜೋಗವೇನೋ ಎಂದೆನಿಸುತ್ತದೆ.. ಅಷ್ಟು ಸುಂದರ, ರಮಣೀಯ ಈ ಜೋಗ. ಕವನದಲ್ಲಿ ಅದರ ವರ್ಣನೆ ತುಂಬಾ ಚೆನ್ನಾಗಿ ಮೂಡಿದೆ.

ಕಿರಣ್ ಜಯಂತ್ said...

ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು ತೇಜಸ್ವಿನಿಯವರೆ. ಮುಂಗಾರು ಮಳೆಗೆ ಚುರುಕು ಮುಟ್ಟಿದೆ, ಮತ್ತೆ ಹೋಗಿ ಬನ್ನಿ ಜೋಗಕ್ಕೆ.