
ನಮಸ್ಕಾರ ನಮಸ್ಕಾರ ನಮಸ್ಕಾರ.
ನಾನಲ್ಲ ಕಾಮಿಡಿ ಟೈಂ ಗಣೇಶ.
ನಾನೊಬ್ಬ ಮರದ ತುಂಡು.
ಕಾಯಕ ಬಂದು ದಂಡಿಸುವುದ ಚೆಂಡು.
ಹೆಸರು ನಂದು MRF.
ಪಾಲಕ-ಪೋಷಕ ಸಚಿನ್.
ಸಂಬಳ ವರುಷಕೆ ಐದಾರು ಕೋಟಿ.
ನನ್ನ ತಮ್ಮನೊಬ್ಬ ಬ್ರಯಾನ್ ಲಾರ ಜೊತೆ ಇದ್ದ.
ಚಿಕ್ಕ ತಮ್ಮ ಸ್ಟ್ಟೀವ್ ವಾ ಜೊತೆ ಗೆದ್ದ.
ವಯಸ್ಸಿನಾಗೆ ನಂಗಿಂತಾ ಚಿಕ್ಕವ್ರು.
ಚಂದಾಗೆ ಕಾಸು ಮಾಡಿದ್ರು.
ಈಗ ಇಬ್ರೂವೆ ರಿಟೈರಾಗವ್ರೆ.
ಕೈ-ತುಂಬಾ ಪೆನ್ಶನ್ನು ತಗೋತಾವ್ರೆ.
ನಂಗೂ ವಯಸ್ಸಾಯಿತು ನೋಡಿ.
ಹದಿನೆಂಟು ವರುಷ ದುಡಿದಿವ್ನಿ.
ಪಬ್ಲಿಕ್ಕು ಹೋಗು ಅನ್ನುತ್ತೆ, ಕಾಡು ಬಾ ಅನ್ನತ್ತೆ.
ನಮ್ ಸಚಿನ್ ದೇವ್ರು 2015 ರ ವಿಶ್ವಕಪ್ನೂ ಆಡ್ಬೇಕಂತೆ.
ಮೀಡಿಯಾದವರು-ಕಾಮ್ಮೆಂಟೇಟರ್ರು ಬೈತಾವ್ರಂತೆ.
IPL ಲೀಗ್ ನವರು "ಐಕಾನ್" ಹೀರೋ ಮಾಡಿ ಮರ್ಯಾದೆ ಉಳ್ಸುದ್ರು.
ನಮ್ಮಪ್ಪನ ಆಣೆಗೂ ಮುರು ಕಾಸಿಗೂ ಹರಾಜು ಆಗ್ತಿರ್ಲಿಲ್ಲ ದ್ಯಾವ್ರು.
ನಮ್ ಓನರ್ ಗೆ ಹೊಸಿ ನೀವಾರ ಹೇಳಿ.
ನಂಗೂ ಮುಕ್ತಿ ಕೊಡ್ಸಿ ಶ್ಯಾನೆ ಪುಣ್ಯ ಕಟ್ಕಳಿ.
ಫೈನಲ್ ಮ್ಯಾಚ್ಗೆ ಟೈಮ್ ಆತು. ಬತ್ತೀನಿ ಮತ್ತೆ.
3 comments:
Beautiful, ಕಿರಣ್! ಹೊಸ ಮಾದರಿಯ ಕವಿತೆ,ಚೆನ್ನಾಗಿ ಬರೆದೀರಿ.
ನನ್ನ ಬ್ಲಾಗ್ ಗೆ ಭೇಟಿ ಕೊಟ್ಟು ಬೆನ್ನು ತಟ್ಟಿದಕ್ಕೆ ತುಂಬಾ ಧನ್ಯವಾದಗಳು ಸುನಾತ್. ನಾನು ಆಗ್ಲಿಂದ ಪ್ರಾರ್ಥಿಸುತ್ತ ಇದ್ದೇನೆ - ಸಚಿನ್ ಈ ಮ್ಯಾಚ್ ಗೆಲ್ಲಿಸಲಿ ಅಂತ :)
ha ha ha..
MRF bat parvaaagilla bahala chennagi thanna maalikana bagge aniDSIke heliDhe :)
Post a Comment